Thursday, March 13, 2008

ಯಕ್ಷಗಾನ ಮಾಹಿತಿಗಳನ್ನು ಇತರರ ಜತೆ ಹಂಚಿಕೊಳ್ಳಿರಿ...

ತೆಂಕು - ಬಡಗು ತಿಟ್ಟಿನ ಯಕ್ಷಗಾನ ವೃತ್ತಿಪರ ಮುಮ್ಮೇಳ - ಹಿಮ್ಮೇಳ ಕಲಾವಿದರ ಮಾಹಿತಿ ಸಂಗ್ರಹಿಸುವ ಮತ್ತು
ಆಧುನಿಕ ತಂತ್ರಜ್ಞಾನವಾದ ಇಂಟರ್ ನೆಟ್ ಬ್ಲಾಗ್ ಮೂಲಕ ಪ್ರಕಟಿಸುವ ದೃಷ್ಟಿಯಿಂದ ಪರಿಚಯಗಳನ್ನು ಅಹ್ವಾನಿಸಲಾಗಿದೆ.
ಕಲಾವಿದರು ತಮ್ಮ ಸ್ವವಿವರ, ಇತರ ವೃತ್ತಿ, ಕುಟುಂಬ ಮಾಹಿತಿ. ಭಾವಚಿತ್ರ, ವೇಷದ ಚಿತ್ರ, ವ್ಯವಸಾಯಗೈಯುತ್ತಿರುವ- ಗೈದ ಮೇಳ, ದೊರೆತ ಪ್ರಶಸ್ತಿಗಳ ವಿವರ, ಯಕ್ಷಗಾನದ ಬೆಳವಣಿಗೆಗಳ ಬಗೆಗಿನ ಅಭಿಪ್ರಾಯ, ವೃತ್ತಿ ಕ್ಷೇತ್ರದ ಅವಿಸ್ಮರಣೀಯ ಘಟನೆ, ಹಾಸ್ಯ - ಗಂಭೀರ ಘಟನೆಗಳನ್ನು ಬರೆದು ಕಳುಹಿಸಬಹುದು. ಯಕ್ಷಗಾನ ಕುರಿತ ಲೇಖನಗಳಿಗೂ ಸ್ವಾಗತ. ಬಾಲ ಕಲಾವಿದರಿಂದ ಹಿಡಿದು ಪ್ರಶಸ್ತಿ ಪಡೆದ - ಪಡೆಯದ ಹಿರಿಯ ಕಲಾವಿದರವರೆಗೆ ಸಮಗ್ರ ಮಾಹಿತಿ ಸಂಗ್ರಹಿಸುವ ಉದ್ದೇಶವಿದ್ದು ಸದ್ಯದ ಯಕ್ಷರಂಗದ ಸ್ಥಿತಿ-ಗತಿಗಳನ್ನು ದಾಖಲಿಸುವ ಯತ್ನ ಇದಾಗಿದೆ.
ನೀವು ಕಲಾವಿದರೇ? ಹಾಗಾದರೆ ಮತ್ತೇಕೆ ತಡ ತಕ್ಷಣ ವಿವರವಾಗಿ ಬರೆಯಿರಿ...
ವಿವರಗಳನ್ನು ಕಳುಹಿಸಬೇಕಾದ ವಿಳಾಸ - ಆರ್.ಎಸ್.ಕೆ, ಬಯಲಾಟ ಬಯೋಡಾಟಾ, ಕೇರಾಫ್ - ಪಂಚಮಿ ಸ್ಟುಡಿಯೋ, ಗಣೇಶಪುರ ಕಾಟಿಪಳ್ಳ - 575030 ದ.ಕ, ಮಂಗಳೂರು